Surprise Me!

News Cafe | ಇಂದು ಜಡ್ಜ್ ಎದುರು ಸಂತ್ರಸ್ತೆಯರು ಹಾಜರು | Aug 29, 2022

2022-08-29 11 Dailymotion

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪದಡಿ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.. ಮಠದಲ್ಲಿ ಹತ್ತನೇ ತರಗತಿ ಓದುತ್ತಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಒಡನಾಡಿ ಸಂಸ್ಥೆಯ ಇಬ್ಬರು ಸದಸ್ಯರು, ಸಿಡಬ್ಲ್ಯೂಸಿ ಕಮಿಟಿಯ ಅಧ್ಯಕ್ಷ ಪ್ರಭಾಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗು ಮಹಿಳಾ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಸಂತ್ರಸ್ತೆಯರ ವಿಚಾರಣೆ ನಡೆಸಲಾಯ್ತು. ಸತತ ಐದು ಗಂಟೆಗಳ ಕಾಲ ವಿವರಣೆ ಪಡೆದಿದ್ದು, ಮೈಸೂರಿನಲ್ಲಿ ಹೇಳಿದ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯ ಡಾ.ಉಮಾರಿಂದ 2 ಗಂಟೆಗಳ ಕಾಲ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯ್ತು. ಸದ್ಯ ಬಾಲಮಂದಿರದಲ್ಲಿ ಸಂತ್ರಸ್ತ ಬಾಲಕಿಯರು ಇದ್ದಾರೆ. ಸಿಡಬ್ಲ್ಯೂಸಿ ಕೌನ್ಸಿಲಿಂಗ್ ನಂತರ ಬಾಲಕಿಯರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ಹೇಳಿದನ್ನೇ ನ್ಯಾಯಾಧೀಶರ ಮುಂದೆ ಹೇಳಿದರೆ, ಮುರುಘಾ ಶ್ರೀಗಳು ಪೋಕ್ಸೋ ಪ್ರಕರಣದ ಬಲೆಗೆ ಬೀಳಲಿದ್ದು, ವಿಚಾರಣೆ ಎದುರಿಸಲಿದ್ದಾರೆ.ಹೀಗಾಗಿ ಸಂತ್ರಸ್ತ ಬಾಲಕಿಯರ ಹೇಳಿಕೆ ಶ್ರೀಗಳ ಭವಿಷ್ಯ ನಿರ್ಧಾರ ಮಾಡಲಿದೆ. ಶ್ರೀಗಳಿಗೆ ಮತ್ತು ಇತರೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.

#publictv #newscafe #murughamutt